1 ಸಮುವೇಲನು 30 : 1 (KNV)
ದಾವೀದನೂ ಅವನ ಜನರೂ ಮೂರನೇದಿವಸದಲ್ಲಿ ಚಿಕ್ಲಗಿಗೆ ಬಂದು ಸೇರುವಷ್ಟರಲ್ಲಿ ಏನಾಯಿತಂದರೆ, ಅಮಾಲೇಕ್ಯರು ದಕ್ಷಿಣ ಸೀಮೆಯ ಮೇಲೆಯೂ ಚಿಕ್ಲಗಿನ ಮೇಲೆಯೂ ಬಂದು ಬಿದ್ದು ಚಿಕ್ಲಗನ್ನು ಹೊಡೆದು ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು
1 ಸಮುವೇಲನು 30 : 2 (KNV)
ಅದರಲ್ಲಿದ್ದ ಸ್ತ್ರೀಯರನ್ನು ಸೆರೆಹಿಡಿದು ಹಿರಿಯರ ನ್ನಾದರೂ ಕಿರಿಯರನ್ನಾದರೂ ಕೊಂದುಹಾಕದೆ ಅವ ರನ್ನು ಸೆರೆಯಾಗಿ ತೆಗೆದುಕೊಂಡು ತಮ್ಮ ಮಾರ್ಗ ವಾಗಿ ಹೊರಟುಹೋದರು.
1 ಸಮುವೇಲನು 30 : 3 (KNV)
ದಾವೀದನೂ ಅವನ ಜನರೂ ಆ ಪಟ್ಟಣಕ್ಕೆ ಬಂದಾಗ ಇಗೋ, ಅದು ಬೆಂಕಿಯಿಂದ ಸುಟ್ಟು ಹಾಕಲ್ಪಟ್ಟಿತ್ತು. ಇದಲ್ಲದೆ ಅವರ ಹೆಂಡತಿಯರೂ ಕುಮಾರರೂ ಕುಮಾರ್ತೆಯರೂ ಸೆರೆಯಾಗಿ ಒಯ್ಯಲ್ಪಟ್ಟಿದ್ದರು.
1 ಸಮುವೇಲನು 30 : 4 (KNV)
ದಾವೀದನೂ ಅವನ ಸಂಗಡವಿದ್ದ ಜನರೂ ಅಳುವದಕ್ಕೆ ತಮ್ಮಲ್ಲಿ ಶಕ್ತಿ ಇಲ್ಲದೆ ಹೋಗುವವರೆಗೂ ಗಟ್ಟಿಯಾಗಿ ಅತ್ತರು.
1 ಸಮುವೇಲನು 30 : 5 (KNV)
ದಾವೀದನ ಇಬ್ಬರು ಹೆಂಡತಿಯರಾಗಿದ್ದ ಇಜ್ರೇಲಿನವಳಾದ ಅಹೀನೋವಮಳೂ ಕರ್ಮೆಲಿನವಳಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸೆರೆಯಾಗಿ ಒಯ್ಯ ಲ್ಪಟ್ಟರು.
1 ಸಮುವೇಲನು 30 : 6 (KNV)
ಆದರೆ ಜನರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಕುಮಾರ ಕುಮಾರ್ತೆಯರಿಗೋಸ್ಕರವಾಗಿಯೂ ಮನೋವ್ಯಥೆಪಟ್ಟು ದಾವೀದನನ್ನು ಕಲ್ಲೆಸೆಯಬೇಕೆಂದು ಹೇಳಿಕೊಂಡದ್ದರಿಂದ ಅವನು ಬಹಳ ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು.
1 ಸಮುವೇಲನು 30 : 7 (KNV)
ಆಗ ದಾವೀದನು ಅಹೀಮೆಲೆಕನ ಮಗನಾದ ಎಬ್ಯಾತಾರನೆಂಬ ಯಾಜಕ ನಿಗೆ--ನೀನು ದಯಮಾಡಿ ಏಫೋದನ್ನು ನನಗಾಗಿ ತಕ್ಕೊಂಡು ಬಾ ಅಂದನು. ಹಾಗೆಯೇ ಎಬ್ಯಾತಾರನು ಎಫೋದನ್ನು ದಾವೀದನ ಬಳಿಗೆ ತಂದನು.
1 ಸಮುವೇಲನು 30 : 8 (KNV)
ದಾವೀದನು ಕರ್ತನಿಗೆ--ನಾನು ಆ ದಂಡಿನ ಹಿಂದೆ ಬೆನ್ನಟ್ಟಲೋ? ನಾನು ಅವರನ್ನು ಹಿಂದಟ್ಟಬಹುದೋ ಎಂದು ಕೇಳಿದನು. ಅದಕ್ಕೆ ಆತನು--ನೀನು ಹಿಂದಟ್ಟು; ನಿಶ್ಚಯವಾಗಿ ನೀನು ಅವರನ್ನು ಹಿಂದಟ್ಟಿ ಎಲ್ಲರನ್ನು ಬಿಡಿಸಿಕೊಳ್ಳುವಿ ಅಂದನು.
1 ಸಮುವೇಲನು 30 : 9 (KNV)
ಆಗ ದಾವೀದನೂ ಅವನ ಸಂಗಡ ಇದ್ದ ಆರು ನೂರು ಜನರೂ ಹೋದರು; ಅವರು ಬೆಸೋರ್‌ ಎಂಬ ಹಳ್ಳದ ಬಳಿಗೆ ಬಂದಾಗ ಹಿಂದುಳಿದವರು ಅಲ್ಲಿ ನಿಂತರು.
1 ಸಮುವೇಲನು 30 : 10 (KNV)
ದಾವೀದನು, ತಾನೂ ನಾನೂರು ಜನರೂ ಹಿಂದಟ್ಟಿಹೋದರು. ಬೆಸೋರಿನ ಹಳ್ಳವನ್ನು ದಾಟಲಾರದೆ ದಣಿದಿದ್ದದರಿಂದ ಇನ್ನೂರು ಜನರು ಅಲ್ಲಿ ನಿಂತರು.
1 ಸಮುವೇಲನು 30 : 11 (KNV)
ಅವರು ಒಬ್ಬ ಐಗುಪ್ತ್ಯನನ್ನು ಅಡವಿಯಲ್ಲಿ ಕಂಡುಕೊಂಡು ಅವನನ್ನು ದಾವೀದನ ಬಳಿಗೆ ತಂದು ಅವನಿಗೆ ರೊಟ್ಟಿಕೊಟ್ಟರು; ಅವನು ತಿಂದನು.
1 ಸಮುವೇಲನು 30 : 12 (KNV)
ಅವನಿಗೆ ನೀರನ್ನು ಕುಡಿಸಿ ಅಂಜೂರದ ಫಲದ ಅಡೆಯಲ್ಲಿ ಒಂದು ತುಂಡನ್ನೂ ಒಣಗಿದ ಎರಡು ದ್ರಾಕ್ಷೇ ಗೊಂಚಲುಗಳನ್ನೂ ಅವನಿಗೆ ಕೊಟ್ಟರು. ಅವನು ಅವುಗಳನ್ನು ತಿಂದು ಪ್ರಾಣದಲ್ಲಿ ಚೇತರಿಸಿ ಕೊಂಡನು. ಯಾಕಂದರೆ ಅವನು ರಾತ್ರಿ ಹಗಲು ಮೂರು ದಿವಸದಿಂದ ರೊಟ್ಟಿ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ.
1 ಸಮುವೇಲನು 30 : 13 (KNV)
ದಾವೀದನು ಅವನನ್ನು--ನೀನು ಯಾರವನು? ನೀನು ಎಲ್ಲಿಯವನು ಎಂದು ಕೇಳಿದಾಗ ಅವನು--ನಾನು ಒಬ್ಬ ಅಮಾಲೇಕ್ಯನ ಸೇವಕನಾದ ಐಗುಪ್ತದೇಶದ ಯೌವನಸ್ಥನು. ಈ ಮೂರು ದಿವಸ ನಾನು ರೋಗದಲ್ಲಿ ಬಿದ್ದದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು.
1 ಸಮುವೇಲನು 30 : 14 (KNV)
ಆದರೆ ನಾವು ಕೆರೇತ್ಯರ ದಕ್ಷಿಣ ಪಾರ್ಶ್ವದ ಮೇಲೆಯೂ ಯೆಹೂದದ ಮೇರೆಯ ಮೇಲೆಯೂ ಕಾಲೇಬನ ದಕ್ಷಿಣ ಪಾರ್ಶ್ವದ ಮೇಲೆ ಯೂ ಬಿದ್ದು ಚಿಕ್ಲಗನ್ನು ಬೆಂಕಿಯಿಂದ ಸುಟ್ಟುಬಿಟ್ಟೆವು ಅಂದನು.
1 ಸಮುವೇಲನು 30 : 15 (KNV)
ದಾವೀದನು ಅವನಿಗೆ--ನೀನು ನನ್ನನ್ನು ಆ ದಂಡಿಗೆ ಕರಕೊಂಡು ಹೋಗುತ್ತೀಯಾ ಎಂದು ಕೇಳಿದನು. ಅದಕ್ಕವನು--ನೀನು ನನ್ನನ್ನು ಕೊಂದು ಹಾಕುವದಿಲ್ಲ ಇಲ್ಲವೆ ನನ್ನನ್ನು ನನ್ನ ಯಾಜಮಾನನ ಕೈಯಲ್ಲಿ ಒಪ್ಪಿಸಿಕೊಡುವದಿಲ್ಲ ಎಂದು ನನಗೆ ದೇವರ ಹೆಸರಿನಿಂದ ಪ್ರಮಾಣಕೊಟ್ಟರೆ ನಿನ್ನನ್ನು ಆ ದಂಡಿಗೆ ಕರಕೊಂಡು ಹೋಗುತ್ತೇನೆ ಅಂದನು.
1 ಸಮುವೇಲನು 30 : 16 (KNV)
ಇವನು ದಾವೀದನನ್ನು ಕರಕೊಂಡು ಅಲ್ಲಿಗೆ ಹೋದಾಗ ಅವರು ಭೂಮಿಯ ಮೇಲೆ ಎಲ್ಲೆಲ್ಲಿಯೂ ಫಿಲಿಷ್ಟಿಯರ ದೇಶ ದಲ್ಲಿಯೂ ಯೆಹೂದ ದೇಶದಲ್ಲಿಯೂ ವ್ಯಾಪಿಸಿ ಕೊಂಡು ಎಲ್ಲಾ ಕೊಳ್ಳೆತಕ್ಕೊಂಡು ಬಂದದರಿಂದ ತಿಂದು ಕುಡಿದು ನಾಟ್ಯವಾಡಿಕೊಂಡಿದ್ದರು.
1 ಸಮುವೇಲನು 30 : 17 (KNV)
ಆಗ ದಾವೀದನು ಅವರನ್ನು ಬೆಳಗಿನ ಜಾವದಿಂದ ಮಾರ ನೆಯ ದಿವಸದ ಸಾಯಂಕಾಲದವರೆಗೂ ಸಂಹರಿಸುತ್ತಾ ಇದ್ದನು. ಆದರೆ ಅವರಲ್ಲಿ ಒಂಟೆಗಳ ಮೇಲೆ ಏರಿ ಓಡಿಹೋದ ನಾನೂರು ಮಂದಿ ಯೌವನಸ್ಥರ ಹೊರತು ಒಬ್ಬನಾದರೂ ತಪ್ಪಿಸಿಕೊಂಡದ್ದಿಲ್ಲ.
1 ಸಮುವೇಲನು 30 : 18 (KNV)
ಅಮಾ ಲೇಕ್ಯರು ತಕ್ಕೊಂಡು ಹೋದದ್ದನ್ನೆಲ್ಲಾ ದಾವೀದನು ಬಿಡಿಸಿಕೊಂಡನು. ತನ್ನ ಇಬ್ಬರು ಹೆಂಡತಿಯರನ್ನು ದಾವೀದನು ಬಿಡಿಸಿಕೊಂಡನು.
1 ಸಮುವೇಲನು 30 : 19 (KNV)
ಅವರು ತಕ್ಕೊಂಡು ಹೋದ ಕಿರಿಯರ ಹಿರಿಯರಲ್ಲಾದರೂ ಕುಮಾರ ಕುಮಾರ್ತೆಯರಲ್ಲಾದರೂ ಕೊಳ್ಳೆಯಾದ ಯಾವ ವಸ್ತು ಗಳಲ್ಲಾದರೂ ಒಂದೂ ಕೊರತೆ ಇಲ್ಲದ ಹಾಗೆ ದಾವೀ ದನು ಎಲ್ಲವನ್ನೂ ತಿರಿಗಿ ತಕ್ಕೊಂಡನು.
1 ಸಮುವೇಲನು 30 : 20 (KNV)
ಇದಲ್ಲದೆ ದಾವೀದನು ಅವರ ಎಲ್ಲಾ ಕುರಿ ಪಶುಗಳ ಮಂದೆಗ ಳನ್ನು ಹಿಡಿದನು; ಅವುಗಳನ್ನು ಇವರು ತಮ್ಮ ಪಶು ಗಳಿಗೆ ಮುಂದಾಗಿ ಹೊಡಕೊಂಡು ಹೋಗುತ್ತಾಇವು ದಾವೀದನ ಕೊಳ್ಳೆ ಎಂದು ಅಂದುಕೊಂಡರು.
1 ಸಮುವೇಲನು 30 : 21 (KNV)
ದಾವೀದನ ಹಿಂದೆ ಬರಲಾರದೆ ದಣಿದಿದ್ದರಿಂದ ಬೆಸೋರಿನ ಹಳ್ಳದ ಬಳಿಯಲ್ಲಿ ಬಿಟ್ಟುಹೋಗಿದ್ದ ಇನ್ನೂರು ಜನರ ಬಳಿಗೆ ದಾವೀದನು ಬಂದಾಗ ಅವರು ದಾವೀದನನ್ನೂ ಅವನ ಸಂಗಡ ಇದ್ದ ಜನ ರನ್ನೂ ಎದುರುಗೊಳ್ಳಲು ಹೋದರು. ದಾವೀದನು ಆ ಜನರ ಬಳಿಗೆ ಸೇರಿ ಅವರ ಕ್ಷೇಮಸಮಾಚಾರವನ್ನು ಕೇಳಿದನು.
1 ಸಮುವೇಲನು 30 : 22 (KNV)
ಆಗ ದಾವೀದನ ಸಂಗಡ ಬಂದ ಜನರಲ್ಲಿ ಕೆಟ್ಟವರಾದ ಬೆಲಿಯಾಳನ ಜನರು--ಅವರು ನಮ್ಮ ಸಂಗಡ ಬಾರದೆ ಇದದ್ದರಿಂದ ನಾವು ತಿರಿಗಿ ತಕ್ಕೊಂಡು ಬಂದ ಕೊಳ್ಳೆಯ ವಸ್ತುಗಳಲ್ಲಿ ಅವರಿಗೆ ಒಂದನ್ನೂ ಕೊಡುವದಿಲ್ಲ; ಪ್ರತಿಯೊಬ್ಬನು ತನ್ನ ತನ್ನ ಹೆಂಡತಿ ಮಕ್ಕಳನ್ನು ಮಾತ್ರವೇ ಕರಕೊಂಡು ಹೋಗಲಿ ಅಂದರು.
1 ಸಮುವೇಲನು 30 : 23 (KNV)
ಅದಕ್ಕೆ ದಾವೀದನು--ನನ್ನ ಸಹೋದರರೇ, ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದ ಈ ಗುಂಪನ್ನು ನಮ್ಮ ಕೈಯಲ್ಲಿ ಒಪ್ಪಿಸಿ ಕೊಟ್ಟ ಕರ್ತನು ನಮಗೆ ಕೊಟ್ಟದ್ದಕ್ಕೆ ನೀವು ಹಾಗೆ ಮಾಡಬೇಡಿರಿ. ಈ ಕಾರ್ಯಕ್ಕೋಸ್ಕರ ನಿಮ್ಮ ಮಾತನ್ನು ಯಾರು ಕೇಳುವರು?
1 ಸಮುವೇಲನು 30 : 24 (KNV)
ಆದರೆ ಯುದ್ಧಕ್ಕೆ ಹೋದವನ ಪಾಲಿನ ಹಾಗೆಯೇ ಸಾಮಗ್ರಿಯ ಬಳಿಯಲ್ಲಿ ಕಾದಿರುವವನ ಪಾಲೂ ಇರಲಿ; ಅವರು ಸಮವಾಗಿ ಪಾಲು ಮಾಡಿಕೊಳ್ಳಬೇಕು.
1 ಸಮುವೇಲನು 30 : 25 (KNV)
ಹಾಗೆಯೇ ಅವನು ಆ ದಿವಸ ಮೊದಲ್ಗೊಂಡು ಇಂದಿನ ವರೆಗೂ ಇರುವ ಹಾಗೆ ಇಸ್ರಾಯೇಲಿಗೆ ಅದನ್ನು ನಿಯಮವಾಗಿಯೂ ಕಟ್ಟಳೆಯಾಗಿಯೂ ಮಾಡಿದನು.
1 ಸಮುವೇಲನು 30 : 26 (KNV)
ಆದರೆ ದಾವೀದನು ಚಿಕ್ಲಗಿಗೆ ಬಂದಾಗ ಅವನು ಕೊಳ್ಳೆಮಾಡಿದವುಗಳಲ್ಲಿ ತನ್ನ ಸ್ನೇಹಿತರಾದ ಯೆಹೂ ದದ ಹಿರಿಯರಿಗೆ ಕೆಲವನ್ನು ಕಳುಹಿಸಿ--ಇಗೋ, ಕರ್ತನ ಶತ್ರುಗಳ ಕೊಳ್ಳೆಯಲ್ಲಿ ಇವು ನಿಮಗೆ ಬಹು ಮಾನವೆಂದು ಹೇಳಿದನು.
1 ಸಮುವೇಲನು 30 : 27 (KNV)
ಯಾರಂದರೆ--ಬೇತೇಲಿ ನಲ್ಲಿರುವವರಿಗೂ ದಕ್ಷಿಣ ರಾಮೋತಿನಲ್ಲಿರುವವರಿಗೂ ಯತ್ತೀರಿನಲ್ಲಿರುವವರಿಗೂ
1 ಸಮುವೇಲನು 30 : 28 (KNV)
ಅರೋಯೇರಿನಲ್ಲಿರುವ ವರಿಗೂ ಸಿಪ್ಮೋತಿನಲ್ಲಿರುವವರಿಗೂ ಎಷ್ಟೆಮೋವದ ಲ್ಲಿರುವವರಿಗೂ
1 ಸಮುವೇಲನು 30 : 29 (KNV)
ರಾಕಾಲಿನಲ್ಲಿರುವವರಿಗೂ ಎರಹ್ಮೇ ಲಿಯರ ಪಟ್ಟಣಗಳಲ್ಲಿರುವವರಿಗೂ ಕೇನ್ಯರ ಪಟ್ಟಣ ಗಳಲ್ಲಿರುವವರಿಗೂ
1 ಸಮುವೇಲನು 30 : 30 (KNV)
ಹೊರ್ಮದಲ್ಲಿರುವವರಿಗೂ ಬೋರಾಷಾನಿನಲ್ಲಿರುವವರಿಗೂ ಅತಾಕಿನಲ್ಲಿರುವವರಿಗೂಹೆಬ್ರೋನಿನಲ್ಲಿರುವವರಿಗೂ ದಾವೀ ದನೂ ಅವನ ಜನರೂ ಸಂಚರಿಸುತ್ತಿದ್ದ ಎಲ್ಲಾ ಸ್ಥಳ ಗಳಲ್ಲಿರುವವರಿಗೂ ಕಳುಹಿಸಿದನು.
1 ಸಮುವೇಲನು 30 : 31 (KNV)
ಹೆಬ್ರೋನಿನಲ್ಲಿರುವವರಿಗೂ ದಾವೀ ದನೂ ಅವನ ಜನರೂ ಸಂಚರಿಸುತ್ತಿದ್ದ ಎಲ್ಲಾ ಸ್ಥಳ ಗಳಲ್ಲಿರುವವರಿಗೂ ಕಳುಹಿಸಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: